ಮಾಲಿನಿ ಅವಸ್ಥಿ (ಜನನ ೧೧ ಫೆಬ್ರವರಿ ೧೯೬೭) ಒಬ್ಬ ಭಾರತೀಯ ಜಾನಪದ ಗಾಯಕಿ. ಇವರು ಹಿಂದಿ, ಅವಧಿ, ಬುಂದೇಲ್‌ಖಂಡಿ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ಹಾಡುತ್ತಾರೆ. ೨೦೧೬ ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಗೌರವವನ್ನು ನೀಡಿದೆ. == ಆರಂಭಿಕ ಜೀವನ == ಮಾಲಿನಿ ಅವಸ್ಥಿ ರವರು ಉತ್ತರಪ್ರದೇಶ ಕನ್ನೌಜ್ ನಲ್ಲಿ ಜನಿಸಿದರು . ಅವರು ಲಕ್ನೋದ ಭಟ್ಖಂಡೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು ಅದೇ ವಿಶ‍್ವವಿದ್ಯಾನಿಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಪದ್ಮ ವಿಭೂಷಣ ಪುರಸ್ಕೃತ ವಿದೂಷಿ ಗಿರಿಜಾ ದೇವಿಯವರ ಶಿಷ್ಯೆ. ಮಾಲಿನಿಯವರು ಹಿರಿಯ ಐಎಎಸ್ ಅಧಿಕಾರಿ ಅವನಿಶ್ ಅವಸ್ಥಿಯನ್ನು ವಿವಾಹವಾಗಿದ್ದಾರೆ. == ವೃತ್ತಿ ಜೀವನ == ಮಾಲಿನಿ ಅವಸ್ಥಿ ಜನಪ್ರಿಯ ಶಾಸ್ತ್ರೀಯ ಸಂಗೀತ ಉತ್ಸವವಾದ ಜಹಾನ್-ಎ-ಖುಸ್ರೌನಲ್ಲಿ ನಿಯಮಿತ ಪ್ರದರ್ಶನ ನೀಡುತ್ತಿದ್ದಾರೆ. ೨೦೧೨ ಮತ್ತು ೧೪ರ ಉತ್ತರಪ್ರದೇಶ ಚುನಾವಣಾ ಆಯೋಗವು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿತು. == ಸಾಂಸ್ಕೃತಿಕ ಪ್ರದರ್ಶನಗಳು == ರಾಷ್ಟ್ರೀಯ ಉತ್ತರಪ್ರದೇಶದಲ್ಲಿ ಠುಮ್ರಿ-ಉತ್ಸವ ಮತ್ತು ರಾಗ್-ರಂಗ್-ಉತ್ಸವ, ತಾಜ್-ಮಹೋತ್ಸವ, ಗಂಗಾ- ಮಹೋತ್ಸವ, ಲಕ್ನೋ-ಉತ್ಸವ, ಬುದ್ಧ-ಮಹೋತ್ಸವ, ರಾಮಾಯಣ-ಮೇಳ, ಕಾಜ್ರಿ-ಮೇಳ, ಕಬೀರ್-ಉತ್ಸವ ಇತ್ಯಾದಿ. ರಾಜಸ್ಥಾನದಲ ಶ್ರುತಿ-ಮಂಡಲ್-ಸಮರೋಹ, ಕುಂಭಲ್-ಗರ್ಡ್-ಉತ್ಸವ, ತೀಜ್- ಉತ್ಸವ-ಜೈಪುರ. ಪಂಜಾಬ್ ಮತ್ತು ಹರಿಯಾನಾದ ಸೂರಜ್‌ಕುಂಡ್-ಕ್ರಾಫ್ಟ್-ಮೇಳ ಮತ್ತು ಹೆರಿಟೇಜ್-ಫೆಸ್ಟಿವಲ್-ಪಿಂಜೋರ್ ಅಂತರಾಷ್ಟ್ರೀಯ ಟ್ರಿನಿಡಾಡ್ ಪ್ರವಾಸಿ ದಿವಾಸ್ (೨೦೧೭) ಮಾರಿಟಿಸ್ ಭಾರತೀಯ ಉತ್ಸವ (೨೦೧೫) ಫಿಜಿಯ ಐಸಿಸಿಆರ್ ೪೦ನೇ ವಾರ್ಷಿಕೋತ್ಸವ (೨೦೧೧) ಪಾಕಿಸ್ತಾನದಲ್ಲಿ ಸಾಂಸ್ಕೃತಿಕ ಪ್ರದರ್ಶನ (೨೦೦೭) ಫಿಲಡೆಲ್ಫಿಯಾ ಮತ್ತು ಲಾಸ್ ಏಂಜಲೀಸ್ ನಲ್ಲಿ ಸಾಂಸ್ಕೃತಿಕ ಸಂಗೀತ ಕಚೇರಿ (೨೦೧೬) == ಚಿತ್ರಕಥೆ == ಜೈ ಹೋ ಚಾತ್ ಮಾಯಾ - ಶೈಲೇಂದ್ರ ಸಿಂಗ್, ಮಾಲಿನಿ ಅವಸ್ಥಿ ಭೋಲ್ ಶಿವ್ ಶಂಕರ್ ಬಮ್ ಬಮ್ ಬೋಲೆ ಏಜೆಂಟ್ ವಿನೋದ್ ದಮ್ ಲಗಾ ಕೆ ಹೈಶಾ ಭಗನ್ ಕೆ ರೇಖಾನ್ ಕಿ - ಇಸಾಕ್ (೨೦೧೩ರಚಿತ್ರ) ಚಾರ್ಫುಟಿಯಾ ಚೋಕರೆ (೨೦೧೪ರ ಚಿತ್ರ) == ಪ್ರಶಸ್ತಿಗಳು == ೨೦೧೬ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ೨೦೦೬ರಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಯಶ್ ಭಾರತಿ ಪ್ರಶಸ್ತಿ == ಉಲ್ಲೇಖಗಳು ==